top of page

ಸಮಾಜದಲ್ಲಿ ಮಹಿಳೆಯರು ಸದೃಢರಾಗ ಬೇಕು ; ಬಿ. ರಾಣಿ ಸಂಯುಕ್ತ

  • Writer: newsnowvijayanagar
    newsnowvijayanagar
  • Mar 11
  • 1 min read

ವಿಜಯನಗರ(ಹೊಸಪೇಟೆ)ಮಾ,11:ವಿಜಯನಗರ ಮಹಾವಿದ್ಯಾಲಯದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು, ಉದ್ಘಾಟಿಸಿ ಗಣಿ ಮಾಲೀಕರು ಹಾಗೂ ಸಮಾಜ ಸೇವಕರಾದ ಶ್ರೀಮತಿ ಬಿ. ರಾಣಿ ಸಂಯುಕ್ತ  ಅವರು ಮಾತನಾಡಿ .ನಾನು ಕೂಡ ವಿಜಯನಗರ ಕಾಲೇಜಿನ ವಿದ್ಯಾರ್ಥಿನಿ, ನಾನು ಓದಿದ ಕಾಲೇಜಿಗೆ ಯಾವುದೇ ಕೊಡುಗೆಗಳನ್ನು ನೀಡಲು ಸದಾ ಸಿದ್ದಳಾಗಿರುತ್ತೇನೆ

ಎಂದರು.

ಮಹಿಳೆಯರು ಸಾಮಾಜಿಕವಾಗಿ, ಮಾನಸಿಕವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ, ಧಾರ್ಮಿಕವಾಗಿ ಸದೃಢರಾಗಬೇಕೆಂದು ವಿದ್ಯಾರ್ಥಿನಿಯರಿಗೆ ಕರೆ ನೀಡಿದರು. ವಿಜಯನಗರ ಮಹಾವಿದ್ಯಾಲಯದ ಆಡಳಿತ ಮಂಡಳಿ ಅಧ್ಯಕ್ಷರಾದ ಶ್ರೀ ಎನ್. ಮಲ್ಲಿಕಾರ್ಜುನ ಮೆಟ್ರಿ, ಡಾ.ಎಂ ಪ್ರಭುಗೌಡ, ಪ್ರಾಚಾರ್ಯರು ವಿಜಯನಗರ ಮಹಾವಿದ್ಯಾಲಯ; ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರಾದ ಕೆ.ಮಲ್ಲಿಕಾರ್ಜುನಗೌಡ. ಮಹಿಳಾ ಸಬಲೀಕರಣ ಕೋಶದ ಸಂಚಾಲಕರಾದ ಶ್ರೀಮತಿ ಬಿ.ಎಸ್. ಹೂವಕ್ಕರವರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ವಿಜ್ಞಾನ ಕ್ಷೇತ್ರದಲ್ಲಿ ಸಾಧನೆ ಮಾಡಿದ ಕುಮಾರಿ ಕೀರ್ತನ ಎಂ.ಆರ್, ಕುಮಾರಿ ಹರಿಣಿ, ಕಲಾ ವಿಭಾಗದಲ್ಲಿ ವಿದ್ಯಾಭಾಸ ಮಾಡುತ್ತಿರುವ ಮೂವರು ಅಂಧ ವಿದ್ಯಾರ್ಥಿನಿಯರಿಗೆ, ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಎಂ ಶಾಶವಲಿ. ಆಂಗ್ಲ ಸ್ನಾತಕೋತ್ತರ ಪದವಿಯಲ್ಲಿ ಓದುತ್ತಿರುವಾಗಲೇ ಕೆ -ಸೆಟ್ ಪಾಸಾದ ಕುಮಾರ ಕರ್ಣಂ ಸೃಜನಶೀಲ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು


.ಶ್ರೀಮತಿ ಪದ್ಮಜಾ ಸಿ ಕಾರ್ಯಕ್ರಮವನ್ನು ನಿರ್ವಹಿಸಿದರು. ಡಾ.ಸುಪ್ರಿಯ ಪ್ರಾರ್ಥನೆ ಗೀತೆಯನ್ನು ಹಾಡಿದರು .ಡಾ. ಸುಷ್ಮಾ ಹೂಗಾರ್ ಸ್ವಾಗತಿಸಿದರು. ಡಾ. ಪುಷ್ಪಾ ಕೌಟಗಿ ಅತಿಥಿ ಪರಿಚಯ ಮಾಡಿದರು .ವಿಜಯನಗರ ಪದವಿ ಪೂರ್ವ ಕಾಲೇಜು, ವಿಜಯನಗರ ಪದವಿ ಕಾಲೇಜು


,ಸ್ವತಂತ್ರ ಪದವಿ ಪೂರ್ವ ಕಾಲೇಜಿನ ಸಮಸ್ತ ಬೋಧಕ ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿ ವಿದ್ಯಾರ್ಥಿನಿಯರು ಭಾಗವಹಿಸಿದ್ದರು.

Recent Posts

See All

Comments


bottom of page