top of page

ನೂತನ ಗೈಡ್‌ಗಳಿಗೆ ಪ್ರಮಾಣ ಪತ್ರ ವಿತರಣೆ

  • Writer: newsnowvijayanagar
    newsnowvijayanagar
  • Mar 26
  • 1 min read

ವಿಜಯನಗರ(ಹೊಸಪೇಟೆ), ಮಾ.26: ಹಂಪಿಯ ಘನತೆಯನ್ನು ವಿಶ್ವ ದರ್ಜೆಗೇರಿಸಲು ಹಂಪಿಯ ಸ್ಥಳೀಯ ಪ್ರವಾಸಿ ಮಾರ್ಗದರ್ಶಿಗಳ ಪಾತ್ರ ಹಿರಿದು, ಹೊಸ ಗೈಡ್‌ಗಳು ನೈಜ ಇತಿಹಾಸವನ್ನು ಪ್ರವಾಸಿಗರಿಗೆ ತಿಳಿಸಲು ಮುಂದಾಗಿ ಎಂದು ಶಾಸಕ ಹೆಚ್.ಆರ್.ಗವಿಯಪ್ಪ ಹೇಳಿದರು.

ನಗರದ ಮಲ್ಲಿಗೆ ಹೊಟೇಲ್ ಸಭಾಂಗಣದಲ್ಲಿ ಜಿಲ್ಲಾಡಳಿತ ಹಾಗೂ ಪ್ರವಾಸೋದ್ಯಮ ಇಲಾಖೆ ,ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಮತ್ತು ಅಕರ್ವ ಎಂಟರ್‌ಪ್ರೈಸಸ್ ಸಹಯೋಗದಲ್ಲಿ ನಡೆದ ಪ್ರವಾಸಿ ಮಾರ್ಗದರ್ಶಿಗಳಿಗೆ ಒಂದು ದಿನದ ಪುನಶ್ಚೇತನ ತರಬೇತಿ ಕಾರ್ಯಾಗಾರ ಹಾಗೂ ಪ್ರಮಾಣ ಪತ್ರ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಹಂಪಿಯಲ್ಲಿ ಸುಮಾರು 1600 ದೇಗುಲಗಳಿವೆ. ವಿಜಯನಗರ ಸಾಮ್ರಾಜ್ಯ ಕೇವಲ ಪ್ರವಾಸಿ ತಾಣವಲ್ಲದೇ ಧಾರ್ಮಿಕ ತಾಣವೂ ಆಗಿದೆ. ನಾಡಮಾತೆ ಭುವೇನೇಶ್ವರಿ ದೇಗುಲ ಹಂಪಿಯಲ್ಲಿ ಪ್ರತಿಷ್ಟಾಪಿಸಲಾಗಿದೆ. ಶ್ರೀಪಂಪಾ ವಿರೂಪಾಕ್ಷೇಶ್ವರ ಇತಿಹಾಸ ಶಿವಪುರಾಣದ ಕುರುಹು ತಿಳಿಸುತ್ತದೆ. ತುಂಗಭದ್ರಾ ನದಿ ತೀರದ ದಕ್ಷಿಣ ಕಾಶಿ ಇದಾಗಿರುವುದರಿಂದ ಇದು ವಿಶೇಷ ಸ್ಥಳವಾಗಿದೆ. ದೇಶ ವಿದೇಶದಿಂದ ಆಗಮಿಸುವ ಪ್ರವಾಸಿಗರಿಗೆ ಗೈಡ್ ಕೊರತೆ ಸೃಷ್ಟಿಯಾಗದಂತೆ ಕ್ರಮ ವಹಿಸಿ 75 ಸ್ಮಾರಕ ಮಾರ್ಗದರ್ಶಿಗಳು ಮತ್ತು 25 ಪಾಕೃತಿಕ ಮಾರ್ಗದರ್ಶಿಗಳಿಗೆ ರಾಜ್ಯ ಸರ್ಕಾರದಿಂದ ಅನುಮೋದನೆ ಪಡೆದು ಮೂರು ತಿಂಗಳ ಕಾಲ ತರಬೇತಿ ನೀಡಿ ಒಟ್ಟು 95 ಪ್ರವಾಸಿ ಮಾರ್ಗದರ್ಶಿಗಳಿಗೆ ಗುರುತಿನ ಚೀಟಿ ಮತ್ತು ಪ್ರಮಾಣ ಪತ್ರ ವಿತರಿಸುತ್ತಿರುವುದು ಹೆಮ್ಮೆಯ ವಿಷಯವಾಗಿದೆ.

ಹಂಪಿ ಪ್ರವಾಸೋದ್ಯಮ ಅಭಿವೃದ್ಧಿಗೆ ಆದ್ಯತೆ ನೀಡಿ ಪ್ರತಿ ಸ್ಮಾರಕಗಳಿಗೆ ಆಂತರಿಗೆ ರಸ್ತೆ ಸಂಪರ್ಕ ಕಲ್ಪಿಸುವ ಯೋಜನೆಯನ್ನು ರೂಪಿಸಲಾಗುತ್ತಿದೆ. ಕಮಲಾಪುರ ಕೆರೆ ಅಭಿವೃದ್ಧಿ ಪಡಿಸಿ ಪ್ರವಾಸಿಗರ ನೆಚ್ಚಿನ ತಾಣವನ್ನಾಗಿಸಲು ಶೀಘ್ರವೇ ಕ್ರಮವಹಿಸಲಾಗುವುದು. ಪ್ರ



ವಾಸಿ ಮಾರ್ಗದರ್ಶಿಗಳು ಹಂಪಿ ರಾಯಭಾರಿಗಳಿದ್ದಂತೆ, ನೂತನ ಗೈಡ್‌ಗಳು ತಾಳ್ಮೆ, ಸಹನೆ ಹಾಗೂ ನೈಜ ಇತಿಹಾಸ ತಿಳಿಸುವುದಲ್ಲದೇ ಮಹಿಳಾ ಪ್ರವಾಸಿಗಳ ಸಂರಕ್ಷಣೆಗೆ ಆದ್ಯತೆ ನೀಡಬೇಕಿದೆ. ಈ ಮೂಲಕ

ಹಂಪಿಯ ಘನತೆಯನ್ನು ಸ್ಥಳೀಯರಿಂದಲೇ ವಿಶ್ವದರ್ಜೆಗೇರಿಸಲು ಸಾಧ್ಯವಿದೆ ಎಂದರು.

ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್ ಮಾತನಾಡಿ, ಪ್ರವಾಸಿಗರಿಗೆ ಗೈಡ್ ಕೊರತೆ ನೀಗಿಸಲು ನೂತನ ಗೈಡ್‌ಗಳನ್ನು ಸರ್ಕಾರದ ನಿಯಮಾನುಸಾರ ಆಯ್ಕೆ ಮಾಡಿ ಅಧಿಕೃತ ಪ್ರಮಾಣ ಪತ್ರ ನೀಡಲಾಗಿದೆ. ಹಂಪಿ ಸೇರಿದಂತೆ ಸ್ಮಾರಕಗಳು ಇಲ್ಲಿನ ಪ್ರಾಕೃತಿಕ ಸೌಂದರ್ಯದ ಬಗ್ಗೆ ಹೆಚ್ಚಿನ ಅಧ್ಯಯನ ನಡೆಸಿ ಪ್ರವಾಸಿಗರಿಗೆ ಮನಮುಟ್ಟುವಂತೆ ಮಾಹಿತಿ ನೀಡಲು ಸಿದ್ಧರಾಗಬೇಕಿದೆ ಎಂದರು.

ಬಳಿಕ ನೂತನವಾಗಿ ಆಯ್ಕೆಯಾಗಿರುವ 95 ಪ್ರವಾಸಿ ಮಾರ್ಗದರ್ಶಿಗಳಿಗೆ ಗುರುತಿನ ಚೀಟಿ ಮತ್ತು ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷ ರೂಪೇಶ್ ಕುಮಾರ್, ಉದ್ಯಮಿ ಶ್ರೀಪಾದ್, ತರಬೇತುದಾರ ಚಂದ್ರಶೇಖರ ಶಾಸ್ತ್ರಿ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಸತ್ಯನಾರಾಯಣ ಮಾತನಾಡಿದರು. ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ ಪ್ರಭುಲಿಂಗ ತಳಕೇರಿ ಪ್ರಾಸ್ತಾವಿಕ ಮಾತನಾಡಿದರು, ಪ್ರವಾಸೋದ್ಯಮ ಸಿಬ್ಬಂದಿ ಶ್ರೀಹರಿ ಕಾರ್ಯಕ್ರಮ ನಿರ್ವಹಿಸಿದರು

Recent Posts

See All

Comments


bottom of page