top of page

ಎಸ್ಸೆಸ್ಸೆಲ್ಸಿ ಪರೀಕ್ಷೆ : ಜಿಲ್ಲಾದ್ಯಂತ 20763 ವಿದ್ಯಾರ್ಥಿಗಳು ಹಾಜರು

  • Writer: newsnowvijayanagar
    newsnowvijayanagar
  • Mar 21
  • 1 min read

ವಿಜಯನಗರ (ಹೊಸಪೇಟೆ), ಮಾರ್ಚ್.21: 2024-25ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಮೊದಲನೇ ದಿನ ಪ್ರಥಮ ಭಾಷೆ ಕನ್ನಡ ವಿಷಯದ ಪರೀಕ್ಷೆಗೆ ಜಿಲ್ಲೆಯ ಒಟ್ಟು 20763 ವಿದ್ಯಾರ್ಥಿಗಳು ಹಾಜರಾಗಿದ್ದಾರೆ ಎಂದು ಡಿಡಿಪಿಐ ವೆಂಕಟೇಶ್ ರಾಮಚಂದ್ರಪ್ಪ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಒಟ್ಟು 71 ಪರೀಕ್ಷಾ ಕೇಂದ್ರಗಳಿದ್ದು, ಹಗರಿಬೊಮ್ಮನಹಳ್ಳಿಯ 12 ಕೇಂದ್ರಗಳಲ್ಲಿ 3022 ವಿದ್ಯಾರ್ಥಿಗಳು ಹಾಜರಾಗಿದ್ದು, 56 ವಿದ್ಯಾರ್ಥಿಗಳು ಗೈರು. ಹೊಸಪೇಟೆ 20 ಕೇಂದ್ರಗಳಲ್ಲಿ 5673 ಹಾಜರಾಗಿ, 138 ವಿದ್ಯಾರ್ಥಿಗಳು ಗೈರು. ಹೂವಿನಹಡಗಲಿ 9 ಕೇಂದ್ರಗಳಲ್ಲಿ 2766 ಹಾಜರಾಗಿ, 36 ವಿದ್ಯಾರ್ಥಿಗಳು ಗೈರು. ಕೂಡ್ಲಿಗಿಯ 17 ಕೇಂದ್ರಗಳಲ್ಲಿ 4812 ವಿದ್ಯಾರ್ಥಿಗಳು ಹಾಜರಾಗಿ, 120 ವಿದ್ಯಾರ್ಥಿಗಳು ಗೈರು. ಹರಪನಹಳ್ಳಿಯಲ್ಲಿ 13 ಕೇಂದ್ರಗಳಲ್ಲಿ 4024 ವಿದ್ಯಾರ್ಥಿಗಳು ಹಾಜರಾಗಿ, 116 ಗೈರಾಗಿದ್ದಾರೆ. ಒಟ್ಟಾರೆ ಜಿಲ್ಲಾದ್ಯಂತ 20297 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದಾರೆ. 466 ವಿದ್ಯಾರ್ಥಿಗಳು ಗೈರಾಗಿದ್ದಾರೆ.

Recent Posts

See All

Comments


bottom of page