top of page

ಬೆಂಕಿ ಅವಘಡಗಳಲ್ಲಿ ಧೈರ್ಯವೇ ಸರ್ವತ್ರ ಸಾಧನ, ಸ್ಕೌಟ್ಸ್ ಮತ್ತು ಗೈಡ್ಸ್ ಬೇಸಿಗೆ ಶಿಬಿರ;ವಾಲಿ ಪ್ರಮೋದ್ ಸಲಹೆ.

  • Writer: newsnowvijayanagar
    newsnowvijayanagar
  • 1 day ago
  • 1 min read

ವಿಜಯನಗರ(ಹೊಸಪೇಟೆ): ಅಗ್ನಿ ಅವಘಡಗಳು ಆಕಸ್ಮಿಕ ದುರಂತಗಳಾಗಿದ್ದು, ಧೈರ್ಯವೇ ಸರ್ವತ್ರ ಸಾಧನವಾಗಿದೆ. ತುರ್ತು ಸೇವೆ ನೀಡಿ ಜೀವ ಸಂರಕ್ಷಣೆಗೆ ಆದ್ಯತೆ ನೀಡುವುದು ಅಗ್ನಿಶಾಮಕ ದಳದ ಕರ್ತವ್ಯವಾಗಿದೆ ಎಂದು ಜಿಲ್ಲಾ ಅಗ್ನಿಶಾಮಕ ಅಧಿಕಾರಿ ವಾಲಿಪ್ರಮೋದ್ ಹೇಳಿದರು.

ನಗರದ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆ ಹಾಗೂ ಡಿಎವಿ ಪಬ್ಲಿಕ್ ಶಾಲೆಯ ಸಹಯೋಗದಲ್ಲಿ ಏರ್ಪಡಿಸಿದ್ದ ಬೇಸಿಗೆ ಶಿಬಿರವನ್ನು ಉದ್ಘಾಟಿಸಿ ಮಂಗಳವಾರ ಮಾತನಾಡಿದರು, ಬೆಂಕಿ ಅವಘಡಗಳಲ್ಲಿ ಧೈರ್ಯ, ತಾಳ್ಮೆಯಿಂದ ಸೇವೆ ನೀಡಲು ಮುಂದಾಗಬೇಕು.ಅಗ್ನಿ ದುರಂತಗಳು ನಡೆದಾಗ ತೆಗೆದುಕೊಳ್ಳಬೇಕಾದ ಕ್ರಮಗಳನ್ನು ಅರಿತಿರಬೇಕು ಎಂದರು.ಬಳಿಕ ಫೈಯರ್ ಇಂಜಿನ್ ಸಹಾಯದಿಂದ ದೊಡ್ಡ ಬೆಂಕಿಗಳನ್ನು ಆರಿಸುವ ಪ್ರಾತ್ಯಕ್ಷಿಕೆಯನ್ನು ತೋರಿಸಿದರು.ಕಟ್ಟಡಗಳಿಗೆ ಬೆಂಕಿ ಬಿದ್ದಾಗ ಆಗ್ನಿ ನಿರೋಧಕ ಉಡುಪು ಮತ್ತು ಕೃತಕ ಉಸಿರಾಟ ಸಿಲಿಂಡರ್‌ನೊಂದಿಗೆ ಅಗ್ನಿಯಲ್ಲಿ ಪ್ರವೇಶಿಸಿ ಪ್ರಾಣರಕ್ಷಣೆ ಮನೆಗಳಲ್ಲಿ ಬಳಸುವ ಎಲ್‌ಪಿಜಿ ಸಿಲಿಂಡರ್ ಸ್ಪೋಟಗೊಂಡಾಗ ಮಾಡಬೇಕಾದ ಮುಂಜಾಗೃತ ಕ್ರಮಗಳನ್ನು ಅಗ್ನಿಶಾಮಕ ಉಪಕರಣಗಳನ್ನು ತಂದು ಅವುಗಳನ್ನು ಹೇಗೆ ಉಪಯೋಗಿಸಬೇಕು ಬೆಂಕಿಯನ್ನು ಹೇಗೆ ನಂದಿಸಬೇಕು ಎಂಬುದನ್ನು ಸ್ವತಃ ಸ್ಕೌಟ್ಸ್ ಗೈಡ್ಸ್ಗಳಿಂದಲೇ ಪ್ರಾತ್ಯಕ್ಷಿಕೆ ಮಾಡಿಸಿ ಮಕ್ಕಳಲ್ಲಿ ಧೈರ್ಯ ತುಂಬಿಸಲಾಯಿತು.

ಇದೇ ವೇಳೆ ಡಿಎವಿ ಶಾಲೆಯಲ್ಲಿ ಎರಡು ಗೈಡ್ಸ್ ಎರಡು ಸ್ಕೌಟ್ ಘಟಕಗಳಿದ್ದು 23-24ನೇ ಸಾಲಿನಲ್ಲಿ 45 ಮಕ್ಕಳು ರಾಜ್ಯ ಪುರಸ್ಕಾರ ಪಡೆದ ಮಕ್ಕಳನ್ನು ಅಭಿನಂದಿಸಿದರು. ಅಲ್ಲದೆ 24-25ನೇ ಸಾಲಿನಲ್ಲಿ ಇದೇ ಪಿಯು ಕಾಲೇಜಿನಲ್ಲಿ ರಾಜ್ಯ ಪುರಸ್ಕಾರ ಪಡೆದ ಗೈಡ್ ವಿದ್ಯಾರ್ಥಿನಿ ಕು.ಜಿ.ಎನ್ ಪೂರ್ವಿ ವಾಣಿಜ್ಯ ವಿಭಾಗದಲ್ಲಿ ರಾಜ್ಯಕ್ಕೆ 6ನೇ ರ‍್ಯಾಂಕ್ ಪಡೆದಿದ್ದಕ್ಕಾಗಿ ಗೌರವಿಸಿ ಸನ್ಮಾನಿಸಲಾಯಿತು.

ಈ ವೇಳೆ ಆಡಳಿತ ವೈದ್ಯಾಧಿಕಾರಿ ಡಾ.ಹರಿಪ್ರಸಾದ್ ಆನೆಗೊಂದಿ, ಟಿಎಂಎಇಎಸ್ ಅಕಾಡೆಮಿ ಆಫ್ ಸೈನ್ಸ್ ಅಂಡ್ ಕಾಮರ್ಸ್ ನಿರ್ದೇಶಕ ಟಿ.ಎಂ ಚಂದ್ರಶೇಖರ್,ಸ್ಕೌಟ್ಸ್ ಮತ್ತು ಗೈಡ್ಸ್ ಸಂಘದ ಜಿಲ್ಲಾ ಕಾರ್ಯದರ್ಶಿ ಪಿ.ಮಂಜುನಾಥಪ್ಪ,ಡಿಎವಿ ಪಬ್ಲಿಕ್ ಶಾಲೆಯ ಪ್ರಾಚಾರ್ಯ ಎಸ್.ಅಶುತೋಷ್,ಸಂಸ್ಥೆಯ ಕಾರ್ಯದರ್ಶಿ ತಿಪ್ಪೇಸ್ವಾಮಿ ಉಪಸ್ಥಿತರಿದ್ದರು.

Recent Posts

See All

Comments


bottom of page