top of page

ಐಇಸಿ ಚಟುವಟಿಕೆ ನಿರ್ವಹಿಸಲು ಎಸ್‌ಹೆಚ್‌ಜಿ, ಎನ್‌ಜಿಓ ಸದಸ್ಯರ ನೇಮಕಾತಿಗೆ ಅರ್ಜಿ ಅಹ್ವಾನ

  • Writer: newsnowvijayanagar
    newsnowvijayanagar
  • Apr 9
  • 1 min read

ಐಇಸಿ ಚಟುವಟಿಕೆ ನಿರ್ವಹಿಸಲು ಎಸ್‌ಹೆಚ್‌ಜಿ, ಎನ್‌ಜಿಓ ಸದಸ್ಯರ ನೇಮಕಾತಿಗೆ ಅರ್ಜಿ ಅಹ್ವಾನ


ವಿಜಯನಗರ(ಹೊಸಪೇಟೆ): ಜಿಲ್ಲಾ ವ್ಯಾಪ್ತಿಯ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಸ್ವಚ್ಛ ಭಾರತ್ ಮಿಷನ್ 2.0 ರ ಅಡಿಯಲ್ಲಿ ಐಇಸಿ ಚಟುವಟಿಕೆಗಳನ್ನು ಕೈಗೊಳ್ಳಲು ಸ್ವಸಹಾಯ ಸಂಘ,ಎನ್‌ಜಿಓ ಸದಸ್ಯರ ನೇಮಕಾತಿಗೆ ಅರ್ಜಿಗಳನ್ನು ಅಹ್ವಾನಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್ ತಿಳಿಸಿದ್ದಾರೆ.

ಜಿಲ್ಲೆಯ ಹೊಸಪೇಟೆ ನಗರಸಭೆ, ಹರಪನಹಳ್ಳಿ, ಹಗರಿಬೊಮ್ಮನಹಳ್ಳಿ, ಕಮಲಾಪುರ, ಹೂವಿನಹಡಗಲಿ ಪುರಸಭೆಗಳಲ್ಲಿ ಮತ್ತು ಕೂಡ್ಲಿಗಿ,ಕೊಟ್ಟೂರು, ಮರಿಯಮ್ಮನಹಳ್ಳಿ ಪಟ್ಟಣ ಪಂಚಾಯಿತಿಗಳಲ್ಲಿ ಪೂರ್ಣಾವಧಿಗೆ 3 ವರ್ಷಗಳ ಕಾಲ ಐಇಸಿ ಚಟುವಟಿಕೆಗಳನ್ನು ಕೈಗೊಳ್ಳಲು ಆಸಕ್ತಿಯುಳ್ಳ ನಲ್ಮ್ ಡೇ, ಎನ್‌ಆರ್‌ಎಲ್‌ಎಂ,ಎನ್‌ಜಿಓ ಅಡಿಯಲ್ಲಿ ನೋಂದಾಯಿತ ಸ್ವಸಹಾಯ ಸಂಘ,ಎನ್‌ಜಿಓ ಸದಸ್ಯರಿಂದ ಅರ್ಜಿಯನ್ನು ಅಹ್ವಾನಿಸಲಾಗಿದ್ದು,ಆಯ್ಕೆ ಪ್ರಕ್ರಿಯೆ ಮತ್ತು ಗೌರವಧನಕ್ಕೆ ಸಂಬಂಧಿಸಿದ ಇತರೆ ವಿವರಗಳಿಗೆ ಆಯಾ ನಗರ ಸ್ಥಳೀಯ ಸಂಸ್ಥೆಗಳ ಪೌರಾಯುಕ್ತರು, ಮುಖ್ಯಾಧಿಕಾರಿಗಳನ್ನು ಸಂಪರ್ಕಿಸಿ ಮಾಹಿತಿ ಪಡೆಯಲು ಸೂಚಿಸಿದೆ. ಆಸಕ್ತಯುಳ್ಳ ಅಭ್ಯರ್ಥಿಗಳು ಆಯಾ ಕಚೇರಿಗಳಲ್ಲಿ ಅಗತ್ಯ ದಾಖಲಾತಿಗಳೊಂದಿಗೆ ಏ.25 ರ ಸಂಜೆ 5 ಗಂಟೆಯೊಳಗೆ ನಿಗಧಿತ ಅರ್ಜಿ ನಮೂನೆಯೊಂದಿಗೆ ಖುದ್ದಾಗಿ ಸಲ್ಲಿಸಬೇಕೆಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Recent Posts

See All

Comments


bottom of page