top of page

ಫೆ.22 ರಂದು ಕೊಟ್ಟೂರು ಶ್ರೀ ಗುರು ಬಸವೇಶ್ವರ ಸ್ವಾಮಿ ರಥೋತ್ಸವ

  • Writer: newsnowvijayanagar
    newsnowvijayanagar
  • Feb 19
  • 1 min read

ಹೊಸಪೇಟೆ (ವಿಜಯನಗರ): ವಿಜಯನಗರ ಜಿಲ್ಲೆಯ ಕೊಟ್ಟೂರು ತಾಲೂಕಿನ ಶ್ರೀ ಗುರು ಬಸವೇಶ್ವರ ಸ್ವಾಮಿ ದೇವಸ್ಥಾನದ ರಥೋತ್ಸವವು ಇದೇ ಫೆ.22 ರಂದು ಜರುಗಲಿದೆ ಎಂದು ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್ ತಿಳಿಸಿದ್ದಾರೆ.

ಪ್ರತಿ ವರ್ಷದಂತೆ ಈ ವರ್ಷ ಕೂಡ ರಥೋತ್ಸವವನ್ನು ಅದ್ದೂರಿಯಾಗಿ ಹಮ್ಮಿಕೊಳ್ಳಲಾಗಿದ್ದು, ಫೆ. 18 ರಿಂದ ಫೆ. 28 ರವರೆಗೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ, ಫೆ. 18 ರಂದು ರಾತ್ರಿ ಬೆಳ್ಳಿರಥದಲ್ಲಿ ನಾಗರ ವಾಹನೋತ್ಸವ ಕಾರ್ಯಕ್ರಮ, ಫೆ. 19 ರಂದು ರಾತ್ರಿ ಬೆಳ್ಳಿ ರಥದಲ್ಲಿ ನವಿಲು ವಾಹನೋತ್ಸವ ಕಾರ್ಯಕ್ರಮ, ಫೆ. 20 ರಂದು ರಾತ್ರಿ ಬೆಳ್ಳಿ ರಥದಲ್ಲಿ ಗಜವಾಹನೋತ್ಸವ ಕಾರ್ಯಕ್ರಮ, ಫೆ.21 ರಂದು ರಾತ್ರಿ ಬೆಳ್ಳಿರಥದಲ್ಲಿ ವೃಷಭ ವಾಹನೋತ್ಸವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಫೆ.22 ರಂದು ಶ್ರೀ ಸ್ವಾಮಿಯ ಮಹಾ ರಥೋತ್ಸವ ನಡೆಯಲಿದೆ.

ವಿಜಯನಗರ ಜಿಲ್ಲೆಯಲ್ಲಿ ಫೆ.22 ರಂದು ಶ್ರೀ ಸ್ವಾಮಿಯ ಮಹಾ ರಥೋತ್ಸವ ನಡೆಯಲಿದ್ದು ಜಾತ್ರಾ ಮಹೋತ್ಸವದಲ್ಲಿ ಮೂಲಭೂತ ಸೌಕರ್ಯ ಮತ್ತು ಜಾತ್ರಾ ಧಾರ್ಮಿಕ ಕಾರ್ಯದ ಬಗ್ಗೆ, ಪೊಲೀಸ್ ಬಂದೋಬಸ್ತ್ ವ್ಯವಸ್ಥೆ, ಆರೋಗ್ಯ ಸೇವೆ ಮತ್ತು ಸ್ವಚ್ಚತೆ ನೈರ್ಮಲೀಕರಣ, ಕೆಎಸ್‌ಆರ್‌ಟಿಸಿ ವÀತಿಯಿಂದ ಹೆಚ್ಚುವರಿ ವಿಶೇಷ ವಾಹನಗಳು, ಅಗ್ನಿ ಶಾಮಕ ದಳ ಸೇವೆ, ವಿದ್ಯುತ್ ವ್ಯವಸ್ಥೆ, ದೇವಸ್ಥಾನದ ಧಾರ್ಮಿಕ ಆಚರಣೆಯ ಬಗ್ಗೆ, ಪಟ್ಟಣ ಪಂಚಾಯಿತಿ ವತಿಯಿಂದ ಅಗತ್ಯ ಮೂಲಭೂತ ಸೌಕರ್ಯಗಳು ಒದಗಿಸುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Recent Posts

See All
ಪೆಟ್ರೋಲಿಯಂ ರಿಟೈಲ್ ಔಟ್‌ಲೇಟ್ ಸ್ಥಾಪನೆ : ಆಕ್ಷೇಪಣೆ ಸಲ್ಲಿಸಲು ಅವಕಾಶ

ವಿಜಯನಗರ(ಹೊಸಪೇಟೆ), ಫೆ.22: ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ ಬಳ್ಳಾರಿ, ವಿಜಯನಗರ ಜಿಲ್ಲೆ ಕೊಟ್ಟೂರು ತಾಲೂಕಿನ ಹ್ಯಾಳ್ಯಾ ಗ್ರಾಮದ ಸರ್ವೆ ನಂ.400/ಎ/2...

 
 
 
ಕೊಟ್ಟೂರು ರಥೋತ್ಸವ : ಮದ್ಯದಂಗಡಿ, ರೆಸ್ಟೋರೆಂಟ್ ಬಂದ್‌ಗೆ ಡಿಸಿ ಆದೇಶ.

ವಿಜಯನಗರ(ಹೊಸಪೇಟೆ), ಫೆ.22 :ವಿಜಯನಗರ ಜಿಲ್ಲೆಯ ಕೊಟ್ಟೂರು ಶ್ರೀಗುರುಬಸವೇಶ್ವರ ಸ್ವಾಮಿಯ ರಥೋತ್ಸವ ಮತ್ತು ಜಾತ್ರೋತ್ಸವ ನಿಮಿತ್ತ ಪ್ರಯುಕ್ತ ಫೆ.21 ರ ಸಂಜೆ 6...

 
 
 

Comments


bottom of page