top of page

ಧರ್ಮಗಳ‌ ಸಾರ ಒಂದೇ ಮನುಷ್ಯತ್ವವಾಗಿದೆ, ಮಾನವೀಯ ಗುಣ ಬೆಳೆಸಿಕೊಳ್ಳಿ: ಈ.ತುಕಾರಾಮ್

  • Writer: newsnowvijayanagar
    newsnowvijayanagar
  • 6 days ago
  • 1 min read

ವಿಜಯನಗರ(ಹೊಸಪೇಟೆ)ಏ,10: ನಗರದ ಸಿದ್ದಿ ಪ್ರಿಯಾ ಕಲ್ಯಾಣ ಮಂಟಪದಲ್ಲಿ ಹಜ್ ಯಾತ್ರಿಕರ ತರಬೇತಿ ಶಿಬಿರವನ್ನು ಹಮ್ಮಿಕೊಂಡಿದ್ದರು, ಮನುಷ್ಯ ಮೊದಲು ಮಾನವೀಯ ಗುಣ ಬೆಳೆಸಿಕೊಂಡು ಪರೋಪಕಾರಿಯಾಗಿ ಬಾಳಬೇಕು ಎಂದು ಲೋಕಸಭಾ ಸದಸ್ಯರಾದ ಈ.ತುಕಾರಾಮ್ ರವರು ಹೇಳಿದರು. ಮುಸ್ಲಿಂ ಸಮುದಾಯಕ್ಕೆ ಹಜ್ ಯಾತ್ರೆ ಬಹು ಪವಿತ್ರವಾಗಿದೆ. ಈ ಯಾತ್ರೆಗೆ ತೆರಳುವವರಿಗೆ ತರಬೇತಿ ನೀಡುವುದು ಅತ್ಯಗತ್ಯವಾಗಿದ್ದು,

ಹೊಸಪೇಟೆ ನಗರಾಭಿವೃದ್ಧಿ ಪ್ರಾದಿಕಾರದ ಅಧ್ಯಕ್ಷರು ಹಾಗೂ ಅಂಜುಮನ್ ಕಮಿಟಿಯ ಅಧ್ಯಕ್ಷರಾದ ಹೆಚ್.ಎನ್. ಮೊಹಮ್ಮದ್ ಇಮಾಮ್ ನಿಯಾಜಿ ಅವರು ಆಯೋಜಿಸಿ ಯಾತ್ರಿಗಳಿಗೆ ಕರ್ನಾಟಕ ಹಜ್‌ ತರಬೇತಿ ಪೋರಂ ವತಿಯಿಂದ‌ ಮಾರ್ಗದರ್ಶನ ನೀಡುತ್ತಿರುವುದು ಶ್ಲಾಘನೀಯ ಎಂದರು.

ಎಲ್ಲಾ ಧರ್ಮಗಳ‌ ಸಾರ ಒಂದೇ ಮನುಷ್ಯತ್ವವಾಗಿದೆ, ಎಲ್ಲರನ್ನೂ ಒಳಗೊಂಡು ಬದುಕುವುದೇ ನಿಜವಾದ ಮನುಷ್ಯನ ಗುಣವಾಗಿದೆ, ನಮ್ಮ ಅಚಾರ ವಿಚಾರ ಬೇರೆ ಇರಬಹುದು ಅಷ್ಟೇ, ನಾವೆಲ್ಲರೂ ಮನುಷ್ಯ ಜಾತಿಯವರು‌ ಎಂದು ಹೇಳುತ್ತಾ, ನಾನು ಎಲ್ಲ ಜಾತಿ ಜನಾಂಗ ಧರ್ಮದವರ ಪ್ರತಿನಿಧಿಯಾಗಿದ್ದು ಎಲ್ಲರೂ ನನಗೆ ಸಮಾನರೂ ಯಾರಿಗೂ ಅನ್ಯಾಯವಾಗದಂತೆ ಸೇವೆ‌ ತಲುಪಿಸುತ್ತೇನೆ ಎಂದು ಭರವಸೆ‌ ನೀಡಿದರು.

ರಾಜ್ಯ ಹಜ್‌ ಕಮಿಟ ಅಧ್ಯಕ್ಷರಾದ ಜನಾಬ್‌ ಜುಲ್ಫಿಕರ್‌ ಅಹಮ್ಮದ್ ಖಾನ್ ( ಟಿಪ್ಪು) ಮಾತನಾಡಿ, ಸರಕಾರಗಳು ಹಜ್ ಯಾತ್ರಾರ್ಥಿಗಳಿಗೆ ಸಹಕಾರ ನೀಡುತ್ತಿದ್ದು ಮುಸ್ಲಿಂ ಬಾಂಧವರು ಸರಕಾರ ನೀಡುವ ಶೈಕ್ಷಣಿಕ ಮತ್ತು ಆರ್ಥಿಕ ಸೌಲಭ್ಯಗಳ ಸಮಪಯೋಗ ಪಡಿಸಿಕೊಳ್ಳಬೇಕು ಹಾಗೂ ಯಾತ್ರೆಯನ್ನು ಯಶಸ್ವಿಯಾಗಿ ನೇರವೆರಿಸಬೇಕು ಎಂದರು.


6 ಜಿಲ್ಲೆ ಗಳಿಂದ 639 ಆಗಮಿಸಿರುವ ಯಾತ್ರಾರ್ಥಿಗಳಿಗೆ ತರಬೇತಿ ನೀಡಿ,ಹಜ್‌ ಯಾತ್ರೆಗೆ ಕಳುಹಿಸಿ ಕೊಡಲಾಗುವುದೆಂದು ಹೇಳಿದರು.ಹಜ್‌ ಯಾತ್ರೆಯ ಶಿಬಿರವನ್ನು ಆಯೋಜಿಸಿದ ಹೆಚ್.ಎನ್. ಮೊಹಮ್ಮದ್ ಇಮಾಮ್ ನಿಯಾಜಿರವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತಾನಾಡಿ ಹಜ್ ಯಾತ್ರಿಗಳು ನಾಡಿನ ಈ ದೇಶದ ಒಳಿತಿಗಾಗಿ ಭಗವಂತನಲ್ಲಿ ಪ್ರಾರ್ಥನೆ ಸಲ್ಲಿಸಬೇಕು, ಹಾಗೂ ನಿಮ್ಮ ಯಾತ್ರೆಯು ಸುಖಕರವಾಗಿರಲಿ ಎಂದು ಕೋರಿದರು.


ಹಜ್‌ ತರಬೇತಿಯನ್ನು ಕರ್ನಾಟಕ ಹಜ್‌ ತರಬೇತಿ ಪೋರಂ ನ ನಿವೃತ್ತ ಕೆ.ಎ.ಎಸ್. ಅಧಿಕಾರಿಗಳಾದ ಎಜಾಜ್‌ ಅಹಮ್ಮದ್ ಹಾಗೂ ಅವರ ತಂಡದವರು ನೀಡಿದರು.



ಈ ಸಂದರ್ಭದಲ್ಲಿ ರಾಜ್ಯ ಹಜ್‌ ಕಮಿಟಿ ಮಾಜಿ ಅಧ್ಯಕ್ಷರಾದ ದಾದ ಸಾಹೇಬ್, ಅಂಜುಮನ್ ಕಮಿಟಿಯ ಪದಾಧಿಕಾರಿಗಳಾದ ಬಿ.‌ಅನ್ಸರ್ ಬಾಷಾ,ಫಿರೋಜ್ ಖಾನ್, ಅಬೂಬ್ ಕರ್,ಕೆ.ಮೋಸಿನ್, ಸದ್ದಾ‌ಂ ಹುಸೇನ್,ಡಾ. ದರ್ವೇಶ್,ಗುಲಾಮ್ ರಸೂಲ್ ,ವಿಜಯನಗರ ಜಿಲ್ಲಾ ವಕ್ಫ ಬೋರ್ಡ್ ಅಧ್ಯಕ್ಷರಾದ ದಾದಾಪೀರ್,ನಗರಸಭೆ ಸದಸ್ಯರಾದ ಅಸ್ಲಾಂ ಮಳಗಿ, ಜಿಲ್ಲಾ ವಕ್ಫ ಮಾಜಿ ಅಧ್ಯಕ್ಷ ಟಿ. ರಫೀಕ್,ಸಮಾಜದ ಮುಖಂಡರಾದ ಹೆಚ್.ಎನ್. ಎಫ್, ಅಲಿಬಾಬಾ, ಖಲಂದರ್,ಖಾಜಾ‌ ಹುಸೇನ್‌ನಿಯಾಜಿ,ಇತರರು ಉಪಸ್ಥಿತರಿದ್ದರು.

Recent Posts

See All

Comments


bottom of page