top of page

ಗ್ರಾಪಂ ಉಪ ಚುನಾವಣೆ : ಚುನಾವಣಾಧಿಕಾರಿಗಳ ನೇಮಕ

  • Writer: newsnowvijayanagar
    newsnowvijayanagar
  • 5 days ago
  • 1 min read

ವಿಜಯನಗರ(ಹೊಸಪೇಟೆ)ಏ,11: ಜಿಲ್ಲೆಯ ಹರಪನಹಳ್ಳಿ, ಕೂಡ್ಲಿಗಿ, ಹಡಗಲಿ ಮತ್ತು ಹಗರಿಬೊಮ್ಮನಹಳ್ಳಿ ತಾಲೂಕುಗಳಲ್ಲಿ ವಿವಿಧ ಕಾರಣಗಳಿಂದ ತೆರವಾಗಿರುವ ಗ್ರಾ.ಪಂ ಸದಸ್ಯ ಸ್ಥಾನಗಳಿಗೆ ಉಪಚುನಾವಣೆ ನಡೆಸಲು ಚುನಾವಣಾಧಿಕಾರಿ ಮತ್ತು ಸಹಾಯಕ ಚುನಾವಣಾಧಿಕಾರಿಗಳನ್ನು ನೇಮಕ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್ ತಿಳಿಸಿದ್ದಾರೆ.

ಹರಪನಹಳ್ಳಿ ತಾಲೂಕಿನ ಕುಂಚೂರು ಗ್ರಾಪಂಗೆ ಚುನಾವಣಾಧಿಕಾರಿಯಾಗಿ ಶರ್ಮತ್ ಐ ಕಣದಮನಿ, ಸಹಾಯಕರಾಗಿ ಲಚಮಾನಾಯ್ಕ.ಎಲ್, ಕೂಡ್ಲಿಗಿ ತಾಲೂಕಿನ ಗುಂಡುಮುಣುಗು ಗ್ರಾಪಂಗೆ ಚುನಾವಣಾಧಿಕಾರಿಯಾಗಿ ಗೋವಿಂದಪ್ಪ, ಸಹಾಯಕರಾಗಿ ಮಂಜುನಾಥ, ಹಡಗಲಿ ತಾಲೂಕಿನ ಇಟ್ಟಿಗಿ ಗ್ರಾಪಂಗೆ ಚುನಾವಣಾಧಿಕಾರಿಯಾಗಿ ಪ್ರದೀಪ್.ಕೆ,ಸಹಾಯಕರಾಗಿ ಎಂ.ಮಂಜುನಾಥ, ಹಗರಿಬೊಮ್ಮನಹಳ್ಳಿ ತಾಲೂಕಿನ ಮಾಲವಿ ಗ್ರಾಪಂಗೆ ಚುನಾವಣಾಧಿಕಾರಿಯಾಗಿ ಎಂ.ಎಸ್.ಗುರುಬಸವರಾಜ, ಸಹಾಯಕರಾಗಿ ಶಿವಲಿಂಗಸ್ವಾಮಿ.ಎನ್.ವಿ, ಹಗರಿಬೊಮ್ಮನಹಳ್ಳಿ ತಾಲೂಕಿನ ಬಾಚಿಗೊಂಡೆನಹಳ್ಳಿ ಗ್ರಾಪಂಗೆ ಅಕ್ಕಿಬಸವರಾಜ, ಡಿ.ರೇವಪ್ಪ ಇವರುಗಳನ್ನು ನೇಮಕ ಮಾಡಿ ಆದೇಶಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Comments


bottom of page