top of page

ಶ್ರೀ ಚೈತನ್ಯ ಶಾಲೆಯ ವಿದ್ಯಾರ್ಥಿಗಳು ಜೆ.ಇ.ಇ ಮೆನ್ಸ್ ಪರೀಕ್ಷೆಯಲ್ಲಿ ಸಾಧನೆ

  • Writer: newsnowvijayanagar
    newsnowvijayanagar
  • Feb 22
  • 1 min read

ವಿಜಯನಗರ(ಹೊಸಪೇಟೆ)



ಫೆ, 22:ಶ್ರೀ ಚೈತನ್ಯ ಟೆಕ್ನೋ ಶಾಲೆಯ ವಿದ್ಯಾರ್ಥಿಗಳು ಜೆ.ಇ.ಇ ಮೆನ್ಸ್ ನಲ್ಲಿ 2024-25 ನೇ ಸಾಲಿನಲ್ಲಿ ಸಾಧನೆಯ ಡಮರುಗ ಬಾರಿಸಿದ್ದಾರೆ.ಹೊಸಪೇಟೆ ನಾಗರಿಕರ ಗಮನ ಸೆಳೆಯುತ್ತಿರುವ ಮತ್ತು ಯಾರಿಂದ ಎಷ್ಟೇ ಮಸಿ ಬಳಿಯುವ ಪ್ರಯತ್ನ ನಡೆಸಿದರು ಶ್ರೀ ಚೈತನ್ಯ ಟೆಕ್ನೋ ಶಾಲೆಯ ವಿದ್ಯಾರ್ಥಿಗಳು ತಮ್ಮ ಸಾಧನೆಯ ಮಾರ್ಗದಲ್ಲಿ ಯಾವುದೇ ಬದಲಾವಣೆ ಮಾಡಿಕೊಳ್ಳದೆ ತಮ್ಮ ಯಶಸ್ಸನ್ನು ಸಾಧಿಸಿದ್ದಾರೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಅಪ್ರತಿಮ ಸಾಧನೆ ಮೆರೆದಿದ್ದಾರೆ ಎಂದು ಪ್ರಾಂಶುಪಾಲರಾದ ಚಂದ್ರಕಲಾ ತಿಳಿಸಿದ್ದಾರೆ.


2024- 25 ನೇ ಸಾಲಿನ ಜನವರಿ 22 ದಂದು ಜೆ.ಇ.ಇ ಮೆನ್ಸ್ ನ ಫಲಿತಾಂಶ ನಮ್ಮ ಶಾಲೆಯ ವಿದ್ಯಾರ್ಥಿಗಳಾದ ಜೆವೆಲ್ ಗುಪ್ತ (99.93%) ನಿತೇಶ್ ದೀಪಾಲಿ(99.70%) ಕಾರ್ತಿಕ್ ಸಾಯಿ (99.08%) ರಾಯೇಶ್ವರ್ (98.99%) ಸಾಯಿ ಪ್ರವೀಣ್ (95%) ಬದ್ರಿನಾಥ್ ಆಯುಷ್ (95%) ಇವರುಗಳ ಈ ಫಲಿತಾಂಶ ನಮ್ಮನ್ನು ಮತ್ತೊಮ್ಮೆ ತಲೆ ಎತ್ತಿ ನಿಲ್ಲುವಂತೆ ಮಾಡಿದ್ದಾರೆ.ಸಂಸ್ಥೆ ವತಿಯಿಂದ ಹಾಗೂ ಪ್ರಿನ್ಸಿಪಾಲರಾದ ಚಂದ್ರಕಲಾ,ಉಪ ಪ್ರಿನ್ಸಿಪಾಲರಾದ ಜಾಹಿರಾ ಖಾನ್,ಡೀನ್ ಪ್ರಸಾದ್,ಎ ಜಿ ಎಂ ಕೃಷ್ಣ ಶಿಕ್ಷಕರು ಹಾಗೂ ಪೋಷಕರು ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.


2024 ರಲ್ಲಿ ನಡೆದ ಆರರಿಂದ ಹತ್ತನೇ ತರಗತಿಯ ಮಕ್ಕಳಿಗೆ ನಡೆಸಿದ ಕ್ಯಾಟ್ ಒಲಂಪಿಯಾಡ್ಸ್ ಪರೀಕ್ಷೆಗಳಲ್ಲಿಯೂ ಭಾಗವಹಿಸಿ ನಮ್ಮ ಶಾಲೆಯ ವಿದ್ಯಾರ್ಥಿಗಳು ಅತ್ಯುತ್ತಮ ಅಂಕಗಳನ್ನು ಪಡೆಯುವುದರೊಂದಿಗೆ 68 ಬಂಗಾರದ ಪದಕಗಳನ್ನು ಹಾಗೂ 68 ಪ್ರಶಸ್ತಿ ಪತ್ರಗಳು ಮತ್ತು ಹದಿಮೂರು ಸಾವಿರ ನಗದು ಹಣವನ್ನು ಪಡೆದಿರುತ್ತಾರೆಂದು ಹೇಳಿಕೊಳ್ಳುವುದಕ್ಕೆ ನಾವು ಹೆಮ್ಮೆಪಡುತ್ತೇವೆ.


ಪ್ರತಿ ವರ್ಷವೂ ನಮ್ಮ ಶಾಲೆಯ ಮಕ್ಕಳು ಸಾಧನೆಯ ಹಾದಿಯಲ್ಲಿರುತ್ತಾರೆ.ಕಳೆದ ವರ್ಷ 2023-24ನೇ ಸಾಲಿನಲ್ಲಿ ನಡೆದ ನೀಟ್ ಪರೀಕ್ಷೆಯಲ್ಲಿ ನಮ್ಮ ಶಾಲೆಯ ವಿದ್ಯಾರ್ಥಿಯಾದ ಭಜನ್ ಕರಿ ಉತ್ತಮ ರಾಂಕ್ ಪಡೆಯುವುದರ ಮೂಲಕ ಮೆಡಿಕಲ್ ಸೀಟ್ ಪಡೆದುಕೊಂಡಿರುತ್ತಾರೆ.ಈ ಬಾರಿ ಅಂದರೆ 2024-25 ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿಯೂ ನಮ್ಮ ಶಾಲೆಯ ಮಕ್ಕಳ ಉತ್ತಮ ಅಂಕಗಳನ್ನು ಗಳಿಸುತ್ತಾರೆ ಎನ್ನುವ ಸಂಪೂರ್ಣ ಭರವಸೆ ನಮಗಿದೆ ಎಂದು ತಿಳಿಸಿದರು.

Recent Posts

See All

Comments


bottom of page