top of page

ಬಸಾಪುರಕ್ಕೆ ಬಸ್ ಸೌಲಭ್ಯ ಕಲ್ಪಿಸಲು ಕರ್ನಾಟಕ ಸೇನೆ ಆಗ್ರಹ

  • Writer: newsnowvijayanagar
    newsnowvijayanagar
  • Mar 12
  • 1 min read

ವಿಜಯನಗರ (ಹೊಸಪೇಟೆ) ವಿಭಾಗದಿಂದ ರಾತ್ರಿ 9:15 ವೇಳೆಯ ಬಸ್ ಕೊಪ್ಪಳ ಜಿಲ್ಲೆಯ ಶಿವಪುರ ಗ್ರಾಮದ ಬದಲು ಬಸಾಪುರ ಗ್ರಾಮಕ್ಕೆ ಹಾಲ್ಟಿಂಗ್(ವಸತಿ )ಮಾಡಬೇಕು ಎಂದು ಮಂಗಳವಾರ ಹೊಸಪೇಟೆ ಕೆ.ಎಸ್.ಆರ್.ಟಿ.ಸಿ ವ್ಯವಸ್ಥಾಪಕ ನಿರ್ದೇಶಕರಿಗೆ ನಮ್ಮ ಕರ್ನಾಟಕ ಸೇನೆ ಮನವಿ ಸಲ್ಲಿಸಿದರು.


ಈಗಾಗಲೇ ಹೊಸಪೇಟೆಯಿಂದ ರಾತ್ರಿ ವೇಳೆಯ ಸರಕಾರಿ ಬಸ್ ಶಿವಪುರ ವಸತಿ ಇದ್ದು ಮುಂಜಾನೆ ಶಿವಪುರ, ಹುಲಿಗಿ ಮಾರ್ಗವಾಗಿ ಹೊಸಪೇಟೆಗೆ ತಲುಪುತಿತ್ತು . ಅದರ ಬದಲಾಗಿ ಶಿವಪುರದಿಂದ ಇನ್ನೂ ಮುಂದಿನ ಗ್ರಾಮಗಳಾದ ಬಂಡಿ ಹರ್ಲಾಪುರ, ನಾರಾಯಣಪೇಟೆ, ಅಯೋಧ್ಯ, ಮಹಮದ್ ನಗರ, ಹಳೆ ಬಂಡಿ ಹರ್ಲಾಪುರ ಗ್ರಾಮದವರೆಗೂ ವಿಸ್ತರಿಸಿ ರಾತ್ರಿ ಅಲ್ಲಿಯೆ ಹಾಲ್ಟಿಂಗ್ ಮಾಡಿ,ಇದರಿಂದ ಅಲ್ಲಿನ 4-5 ಗ್ರಾಮದ ಪ್ರಯಾಣಿಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಹೆಚ್ಚು ಅನುಕೂಲವಾಗಲಿದೆ. ಈ ಮುಂಚೆ ರಾತ್ರಿ ವಸತಿ ಬಸ್ ಈ ಗ್ರಾಮಗಳನ್ನು ಹಾದು ಬೆಳಗ್ಗೆ ಹೊಸಪೇಟೆ ಹೋಗುತ್ತಿತ್ತು.ಹೊಸಪೇಟೆ ವಿಭಾಗಾಧಿಕಾರಿಗಳು ಈಗ ಇದನ್ನು ಶಿವಪುರ ಗ್ರಾಮಕ್ಕೆ ಸೀಮಿತ ಮಾಡಿದ್ದರಿಂದ ಉಳಿದ ಗ್ರಾಮದ ಪ್ರಯಾಣಿಕರು ವಿದ್ಯಾರ್ಥಿಗಳು ತುಂಬಾ ತೊಂದರೆಯನ್ನು ಅನುಭವಿಸುತ್ತಿದ್ದು, ಈ ವಿಷಯಕ್ಕೆ ಸಂಬಂಧಿಸಿದಂತೆ ಬಂಡಿ ಹರ್ಲಾಪುರ ಗ್ರಾಮ ಪಂಚಾಯತಿ ಯಿಂದ ಮನವಿ ಕೂಡ ನೀಡಲಾಗಿತ್ತು. ಸ್ಪಂದಿಸದ ಕಾರಣ ಇಂದು "ನಮ್ಮ ಕರ್ನಾಟಕ ಸೇನೆ"ಯು ವಿಭಾಗೀಯ ನಿಯಂತ್ರಣ ಅಧಿಕಾರಿಗಳನ್ನು ತರಾಟೆಗೆ ತೆಗೆದು ಕೊಂಡು ಶಿವಪುರ ವಸತಿ ಬಸ್ಸ್ ನ್ನು ಬಸಾಪುರವರೆಗೆ ವಿಸ್ತರಿಸುವಂತೆ ಮನವಿ ಮಾಡಿದರು. ಇಲ್ಲವಾದಲ್ಲಿ ಮುಂದಿನ ದಿನಮಾನದಲ್ಲಿ ಉಗ್ರ ಹೋರಾಟ ಮಾಡುತ್ತವೆ ಎಂದು ಸಂಘಟನೆ ಆಗ್ರಹಿಸಿತು.


ಇದೇ ಸಂದರ್ಭದಲ್ಲಿ ಸೇನೆಯ ಪ್ರಚಾರ ಸಮಿತಿ ಜಿಲ್ಲಾಧ್ಯಕ್ಷ ಬೆಳ್ಳಪ್ಪ.ಎ ಬುದಗುಂಪಿ, ಯುವ ಘಟಕ ಜಿಲ್ಲಾಧ್ಯಕ್ಷ ಬಸವರಾಜ್ ಹಂದ್ರಾಳ, ಜಿಲ್ಲಾ.ಪ್ರ.ಕಾರ್ಯದರ್ಶಿ ಶಿವಲಿಂಗೇಶ್ವರ,ತಾಲೂಕ ಅಧ್ಯಕ್ಷ ರಮೇಶ್ ನರೇಗಲ್, ಪದಾಧಿಕಾರಿಗಳಾದ ಭೂಪತಿ ರೆಡ್ಡಿ, ರಾಜಭಕ್ಷಿ ,ಈರಣ್ಣ, ಬೈರೇಶ್, ಮಾರುತಿ ಹಂದ್ರಾಳ,ಫಕಿರೇಶ್, ಭರತ್ ಬೂದುರ್ ಮತ್ತು ಬಂಡಿಹರ್ಲಾಪುರ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸರ್ವರಲಿ ಪತ್ರಕರ್ತರಾದ ಕರೀಮ್, ಅಂಬರೀಷ್ ನಾಯಕ್ ಉಪಸ್ಥಿತಿ ಇದ್ದರು.

Recent Posts

See All

Comments


bottom of page